ನನ್ನ ಧಾರ್ಮಿಕ ಪ್ರಯಾಣವು ತಂದೆ-ತಾಯಿಯ ಆಶೀರ್ವಾದದ ಮೂಲಕ ಶ್ರೀದತ್ತ ಭಕ್ತಿಯಿಂದ ಪ್ರಾರಂಭವಾಯಿತು. ಅನಂತರದಲ್ಲಿ ನನ್ನ ಆಧ್ಯಾತ್ಮಿಕ ಯಾತ್ರೆಯು ಭಗವತೀ ಗಾಯತ್ರೀಯ ಅಪಾರ ಕರುಣೆಯಿಂದ ಗಾಯತ್ರೀಯತ್ತ ಪಲ್ಲಟಗೊಂಡಿತು. ಗಾಯತ್ರೀ ತಪೋಭೂಮಿ, ತಡಸ ಗ್ರಾಮ, ಕರ್ನಾಟಕ, ಇದರ ಸ್ಥಾಪನಾಚಾರ್ಯರಾದ ಪರಮಪೂಜ್ಯನೀಯ ಸದ್ಗುರು ಶ್ರೀ ಶ್ರೀ ವಲ್ಲಭ ಚೈತನ್ಯ ಮಹಾರಾಜರಿಂದ ದೀಕ್ಷೆಹೊಂದಿದ ನಂತರ ಗಾಯತ್ರೀ ಸಾಧನೆಯತ್ತ ನಿರಂತರ ಸಾಗುತ್ತಿರುವುದು.